Ellellu Habba Habba Lyrics
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ,
ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ,
ಕಣ್ತುಂಬ ಪ್ರೀತಿ ಹಬ್ಬ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ,
ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ,
ಕಣ್ತುಂಬ ಪ್ರೀತಿ ಹಬ್ಬ
ಬೇವು ಕೂಡ ಸಿಹಿಯಾಯ್ತು,
ಬೆಲ್ಲ ಮೆಲ್ಲ ಜೇನಾಯ್ತು
ಮನೆಯ ತುಂಬ ನಗುವಿನ
ತೋರಣ ತೂಗಿ ತೂಗಿತು
ಚಿಂತೆ ನೋವು ಹಗುರಾಯ್ತು,
ಸುಗ್ಗಿ ಸಿರಿಯ ಮಳೆಯಾಯ್ತು
ಮನದ ತುಂಬ ಹರುಷದ
ಹೂರಣ ಆಹಾ ಮೂಡಿತು
ಎಲ್ಲೆಲ್ಲೂ ಜೀವ ಕಳೆ,
ಜೀವಕಿದು ಹೂವ ಕಳೆ
ಎಲ್ಲೆಲ್ಲೂ ಜೀವ ಕಳೆ,
ಜೀವಕಿದು ಹೂವ ಕಳೆ
ಹಳೆಯ ಕೊಳೆಯ ತೊಳೆಯ
ಬಂತು ರಂಗಿನ ಯುಗಾದಿ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ,
ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ,
ಕಣ್ತುಂಬ ಪ್ರೀತಿ ಹಬ್ಬ
ಕಳೆದುದೆಲ್ಲ ದೊರೆತಾಯ್ತು,
ದೊರಕಿದ್ದೆಲ್ಲ ವರವಾಯ್ತು
ಹೊಸದು ಹಾದಿ ತೋರಿ
ಬಾಳ ಗೀತೆಯಾಯಿತು
ಹೃದಯ ಕುಣಿವ ನವಿಲಾಯ್ತು,
ಮನೆಯ ತುಂಬ ನಲಿವಾಯ್ತು
ಎಂದು ಹೀಗೆ ಇರಲಿ ಗಾಳಿ
ಗಂಧ ಕೋರಿತು
ಇನ್ನೆಲ್ಲ ಶುಭ ಶಕುನ,
ಅನುದಿನವು ಸನ್ಮಾನ
ಇನ್ನೆಲ್ಲ ಶುಭ ಶಕುನ,
ಅನುದಿನವು ಸನ್ಮಾನ
ಮರೆಯದಂತ ಸವಿಸವಿ ಗಳಿಗೆ
ತಂದಿತು ಯುಗಾದಿ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ,
ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ,
ಕಣ್ತುಂಬ ಪ್ರೀತಿ ಹಬ್ಬ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ,
ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ,
ಕಣ್ತುಂಬ ಪ್ರೀತಿ ಹಬ್ಬ